Suresh Maroli

ಬೋಳ ದಿವಂಗತ ವೆಂಕಪ್ಪ ಭಂಡಾರಿಯವರ ಪುತ್ರ ಮಂಜೇಶ್ವರದ ಕುಂಜತ್ತೂರಿನ ಸುರೇಶ್ ಭಂಡಾರಿ ಮರೋಳಿ ಇವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಕಂಕನಾಡಿ ಖಾಸಗಿ ಆಸ್ಪತ್ರೆಯಲ್ಲಿ ಫೆಬ್ರವರಿ 10 ರ ಮಂಗಳವಾರ ರಾತ್ರಿ ವಿಧಿವಶರಾದರು. ಅವರಿಗೆ ಸುಮಾರು 74 ವರ್ಷ ವಯಸ್ಸಾಗಿತ್ತು.

ಬಾರ್ಕೂರಿನಲ್ಲಿರುವ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಶಿಲಾನ್ಯಾಸದಿಂದ ಪ್ರಾರಂಭಿಸಿ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದ ವರೆಗೆ ಅವಿರತವಾಗಿ ದುಡಿದಿರುವ ಸ್ವಯಂ ಸೇವಕರಲ್ಲಿ ಸುರೇಶ್ ಭಂಡಾರಿ ಮರೋಳಿ ಒಬ್ಬರಾಗಿದ್ದರು.

ಬೆಂಗಳೂರಿನ ಜಾಹೀರಾತು ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ ಸುರೇಶ್ ಮರೋಳಿ  ಬಳಿಕ ಮುದ್ರಣ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಸಂದರ್ಭದಲ್ಲಿ ಅವಿಭಜಿತ ದಕ್ಷಿಣ ಕನ್ನಡ,ಬೆಂಗಳೂರು, ಮುಂಬೈ ನಲ್ಲಿರುವ ಸಮಾಜದ ಬಂಧುಗಳ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಕಚ್ಚೂರು ಶ್ರೀ ನಾಗೇಶ್ವರನ ಭಾವಚಿತ್ರವಿರುವ ಸುಮಾರು 3000 ಪ್ರತಿಯನ್ನು ಸ್ವಂತ ಖರ್ಚಿನಲ್ಲಿ ಮುದ್ರಿಸಿ ಪ್ರತೀ ಮನೆಗೆ ಉಚಿತವಾಗಿ ಹಂಚಿದ ಕೀರ್ತಿ ಸುರೇಶ್ ಮರೋಳಿಯವರದ್ದು.

ಭಂಡಾರಿ ಸಮಾಜದ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದ ಸುರೇಶ್ ಭಂಡಾರಿ ಮರೋಳಿಯವರು ಯಾವುದೇ ವಿಷಯ ಸಿಕ್ಕರೆ ಅದರ ಬಗ್ಗೆ ಆಳವಾದ ಅಧ್ಯಯನ ನಡೆಸಿ ವಿಶ್ಲೇಷಣೆ ಮಾಡುವ ಗುಣವನ್ನು ಹೊಂದಿದ್ದರು.

ಅವರು ಧರ್ಮಪತ್ನಿ ಜ್ಞಾನ, ಇಬ್ಬರು ಮಕ್ಕಳಾದ ಕೌಶಿಕ್ ಮತ್ತು ವಂಶ , ಸಹೋದರ ಸಹೋದರಿಯರು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

ಮೃತರ ಅಂತ್ಯಸಂಸ್ಕಾರವು ಫೆಬ್ರವರಿ 11 ರ ಬುಧವಾರ ಸಂಜೆ 3 ಗಂಟೆಗೆ ಸ್ವಗೃಹ ಶಿವಭಾಗ್ ನಲ್ಲಿ ನಡೆಯಲಿದೆಯೆಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಕುಟುಂಬಕ್ಕೆ ಭಗವಂತನು ಕರುಣಿಸಲಿ ಎಂದು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

ಭಂಡಾರಿ ವಾರ್ತೆ

error: Content is protected !!