ಭಂಡಾರಿ ಸಮಾಜ ಸಂಘದ ವಾರ್ಷಿಕ ಮಹಾಸಭೆ ಅಜೆಕಳ ಭಂಡಾರಿ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಸದಾಶಿವ ಭಂಡಾರಿ ನಂದೊಟ್ಟು ಅಧ್ಯಕ್ಷತೆಯಲ್ಲಿ ಜ. 25 ರಂದು ನಡೆಯಿತು. ಬೆಳಿಗ್ಗೆ ಗಣಹೋಮ, ಸತ್ಯ ನಾರಾಯಣ ದೇವರ ಪೂಜೆ ಹಮ್ಮಿ ಕೊಳ್ಳಲಾಗಿತ್ತು.

ಬಳಿಕ ನಡೆದ ಮಹಾ ಸಭೆಯಲ್ಲಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಲಕ್ಷ್ಮಣ ಕರಾವಳಿ ಬೆಂಗಳೂರು ದೀಪ ಬೆಳಗಿಸಿ ಚಾಲನೆ ನೀಡಿ ಬಂಟ್ವಾಳ ಭಂಡಾರಿ ಸಭಾಭವನ ವರ್ಷದಿಂದ ವರ್ಷಕ್ಕೆ ಬದಲಾವಣೆಯಾಗುತ್ತಾ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ ಇಡೀ ಭಂಡಾರಿ ಸಮಾಜಕ್ಕೆ ಮಾದರಿಯಾಗಿದೆ ಮಹಾಶಿವರಾತ್ರಿ ದಿನದಂದು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಭಜನಾ ಕಾರ್ಯಕ್ರಮಕ್ಕೆ ಬಂಟ್ವಾಳ ಭಂಡಾರಿ ಸಮಾಜ ಬಂಧುಗಳು ತಂಡ ಪಾಲ್ಗೊಳ್ಳುವಂತೆ ವಿನಂತಿಸಿದರು.
ಸಮಾಜದ ಮಕ್ಕಳು ಮುಂದಿನ ಭವಿಷ್ಯಕ್ಕಾಗಿ ಐಐಟಿ. ವ್ಯಾಸಂಗ ಮಾಡಬೇಕು ಜೊತೆಗೆ ಯು.ಪಿ.ಎಸ್.ಸಿ. ಪರೀಕ್ಷೆ ಬರೆದು ಸರಕಾರದ ಆಡಳಿತಾತ್ಮಕ ಹುದ್ದೆಗೆ ಆಯ್ಕೆಯಾಗಬೇಕು ಅಂತ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸದಾ ಸಿದ್ಧ ಎಂದು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷ ಮತ್ತು ಉದ್ಯಮಿ ಸುರೇಶ್ ಭಂಡಾರಿ ಹಿರೇಬೆಟ್ಟು ಹೇಳಿದರು.



ಸರಕಾರದ ಯೋಜನೆಗಳನ್ನು ಪಡೆದುಕೊಂಡು ಉನ್ನತ ವಿದ್ಯಾಭ್ಯಾಸವನ್ನು ಪಡೆಯಬೇಕು ಹಾಗೂ ಭಂಡಾರಿ ಸಮಾಜವನ್ನು ಸರಕಾರ 2A ನಿಂದ 1A ಗೆ ವರ್ಗಾಯಿಸಬೇಕು ಎಂಬುದಾಗಿ ಖ್ಯಾತ ನ್ಯಾಯವಾದಿ ಮನೋರಾಜ್ ರಾಜೀವ ಹೇಳಿದರು.
ಭಂಡಾರಿ ಮಹಾಮಂಡಲದ ಅಧ್ಯಕ್ಷೆ ಅಮಿತಾ ಗಿರೀಶ್ ಭಂಡಾರಿ, ಹಾಸನ ಡಿಸ್ಟ್ರಿಕ್ಟ್ ಕೋರ್ಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಸೆಕೆಂಡ್ ಆಶಾ ಆನಂದ್, ಮೂಡಬಿದಿರೆ ಆಳ್ವಾಸ್ ನರ್ಸಿಂಗ್ ಕಾಲೇಜು ಉಪ ಪ್ರಾoಶುಪಾಲೆ ರೇಣುಕಾ ಭಂಡಾರಿ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ಮುರಳೀಧರ ಭಂಡಾರಿ, ವೇದಿಕೆಯಿಂದ ಶುಭ ಹಾರೈಸಿದರು. ಸಂಘದ ಗೌರವ ಅಧ್ಯಕ್ಷ ಗೋಪಾಲ ಭಂಡಾರಿ ಪುಣ್ಕೆದಡಿ, ಭಂಡಾರಿ ಯುವ ವೇದಿಕೆ ಅಧ್ಯಕ್ಷ ಕೇಶವ ಭಂಡಾರಿ, ಮಹಿಳಾ ವೇದಿಕೆ ಅಧ್ಯಕ್ಷೆ ಸುಜಾತ ಜಗದೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.





ರಾಜ್ಯ ತೆಂಗಿನನಾರಿನ ಮಹಾಮಂಡಳಿ ಬೆಂಗಳೂರು ಇದರ ದ. ಕ. ಜಿಲ್ಲಾ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾದ ರಾಜ್ ಬಂಟ್ವಾಳ್ ಲಲಿತ ದಂಪತಿ, ರಿತ್ವಿಕ್ ಬಂಟ್ವಾಳ, ಸಚಿನ್ ಮತ್ತು ಹಿರಿಯ ಸದಸ್ಯ ಉಮೇಶ್ ಭಂಡಾರಿ ತುಂಬೆ, ಶಿವರಾಮ ಭಂಡಾರಿ ಸರಪಾಡಿ ಅವರನ್ನು ವೇದಿಕೆಯಲ್ಲಿ ಸಮ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಗೌರವಿಸಲಾಯಿತು. ವೃತ್ತಿ ಸೇವಾಕರ್ತ ವಿಶ್ವನಾಥ ಭಂಡಾರಿ ಪೊಳಲಿ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಸಂಘದ ಕಾರ್ಯದರ್ಶಿ ಹೇಮಚಂದ್ರ ಭಂಡಾರಿ ವಾರ್ಷಿಕ ವರದಿ ವಾಚಿಸಿದರು. ಚಂದ್ರಶೇಖರ ಭಂಡಾರಿ ಲೆಕ್ಕಪತ್ರ ಮಂಡಿಸಿದರು. ಪ್ರೊ| ನಾರಾಯಣ ಭಂಡಾರಿ ಸ್ವಾಗತಿಸಿ ಪ್ರಸ್ತಾವನೆ ನೀಡಿದರು. ಶ್ರೀಕಾಂತ ಭಂಡಾರಿ ಪಾಣೆಮಂಗಳೂರು ವಂದಿಸಿದರು. ದಿವ್ಯಲತಾ ಭಾಸ್ಕರ್, ಕಾವ್ಯ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು.