ಮರೆಯಾಗುವ ದಿವಸ ಹತ್ತಿರ ಬರುತ್ತಿದೆನಿನ್ನ ನೆನಪೆಂಬ ದಾರಿ ಕೊನೆಯಾಗುತ್ತಿದೆ

ನಿನ್ನ ನೆನಪಲ್ಲೇ ಬದುಕೋಣವೆಂದು ಮನಸ್ಸು ಹೇಳುತ್ತಿದೆ

ನನ್ನ ಮನದಿ ಕಟ್ಟಿದ ಆಸೆ ಆಕಾಂಕ್ಷೆಗೆ ಬೆಂಕಿ ಇಟ್ಟಾಗಿದೆ

ನಿನ್ನ ಜೊತೆ ಕಳೆದ ದಿನಗಳೇ ಮನದಿ ಮರುಕಳಿಸುತ್ತಿದೆ

ಪ್ರೀತಿಯ ಮಂಪರಿನಲ್ಲಿ ಹುಚ್ಚನಾಗುವೆನೆ ಎಂದು ತಿಳಿಯದಾಗಿದೆ

ಹುಚ್ಚು ಪ್ರೀತಿಯಲಿ  ಬೆಂದು ಹೋಗಿರುವೆನು ನಾನು

ಮರೆಯಾಗುವ ಮುನ್ನ ಯೋಚಿಸು ನೀನು.

ನಿತಿನ್ ಭಂಡಾರಿ

0 thoughts on “ಮರೆಯಾಗುವ ಮುನ್ನ

  1. ಮೊದಲ ಪ್ರೀತಿಯ ಕೆಲಸವೇ
    ಅಷ್ಟು…
    ಹೃದಯದಲ್ಲಿ ಪ್ರೀತಿದೀಪ
    ಅಂಟಿಸುವಷ್ಟು…..!!!

Leave a Reply

Your email address will not be published. Required fields are marked *

error: Content is protected !!